ಕ್ಲಾಡಿಯಸ್, ಆಪಿಯಸ್ ಸೀಕಸ್
 ಕ್ರಿ.ಪೂ. 3ನೆಯ ಶತಮಾನದಲ್ಲಿದ್ದ ರೋಮಿನ ವಾಗ್ಮಿ. ಕೆಳವರ್ಗದವರ ಬಗ್ಗೆ ಸಹಾನುಭೂತಿಯನ್ನು ಹೊಂದಿದ್ದು ಉದಾರವೂ ಸ್ವತಂತ್ರವೂ ಆದ ಅಭಿಪ್ರಾಯಗಳನ್ನು ಪಡೆದಿದ್ದ ಶ್ರೀಮಂತ. ಪೌರ, ರಾಜಕೀಯ ಮತ್ತು ಶವಸಂಸ್ಕಾರದ ಸಂದರ್ಭಗಳಲ್ಲಿನ ಭಾಷಣಗಳಿಗೆ ಹೆಸರಾದವ. ಈತನ ಭಾಷಣಗಳು ಉಪಲಬ್ಧವಿಲ್ಲ. ಸ್ಯಾಟರ್‍ನಿಯನ್ ಛಂದಸ್ಸಿನಲ್ಲಿ ಈತ ರಚಿಸಿದ ಸಾರೋಕ್ತಿಗಳು ಮಾತ್ರ ಉಳಿದಿವೆ. 										(ಎಲ್.ಎಸ್.ಎಸ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ